ಕನ್ನಡ guide · YouTube

YouTube ಇಂದ ಹಣ ಹೇಗೆ ಬರುತ್ತೆ? YouTube earning in Kannada

"ಕನ್ನಡ YouTubers ಎಷ್ಟು ಗಳಿಸ್ತಾರೆ?", "1 ಲಕ್ಷ views ಗೆ ಎಷ್ಟು ಬರುತ್ತೆ?" ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗೋಕೆ ಮೊದಲು YouTube ಹಣ ಹೇಗೆ ಕೊಡುತ್ತೆ ಅಂತ ಅರ್ಥ ಆಗಬೇಕು. ಇಲ್ಲಿ ಎಲ್ಲಾ ದಾರಿಗಳು, RPM, ಮತ್ತು income ಯಾಕೆ ಚಾನೆಲ್‌ನಿಂದ ಚಾನೆಲ್‌ಗೆ ಬದಲಾಗುತ್ತೆ ಅಂತ ಸರಳವಾಗಿ.

ಮೊದಲೇ ಒಂದು ಮಾತು

YouTube "ಇಷ್ಟು views ಗೆ ಇಷ್ಟು ರೂಪಾಯಿ" ಅಂತ fixed ಆಗಿ ಕೊಡಲ್ಲ. ಒಂದೇ ಸಂಖ್ಯೆಯ views ಗೆ ಎರಡು ಚಾನೆಲ್‌ಗಳಿಗೆ ತುಂಬಾ ಬೇರೆ ಬೇರೆ ಹಣ ಬರಬಹುದು. ಅದಕ್ಕೇ ಈ ಪುಟದಲ್ಲಿ ಯಾವ ರೂಪಾಯಿ ಲೆಕ್ಕನೂ ಕೊಟ್ಟಿಲ್ಲ.

1. YouTube ಇಂದ ಹಣ ಬರೋ ದಾರಿಗಳು

Ads (YouTube Partner Programme)

YPP ಸೇರಿದ ಮೇಲೆ ನಿಮ್ಮ ವಿಡಿಯೋಗಳಲ್ಲಿ ads ಬರುತ್ತೆ, ಆ ads ಇಂದ ಬರೋ ಹಣದಲ್ಲಿ ಒಂದು ಭಾಗ ನಿಮಗೆ. ಉದ್ದದ ವಿಡಿಯೋಗಳಿಗೆ ಸಾಮಾನ್ಯವಾಗಿ creator ಗೆ ದೊಡ್ಡ ಭಾಗ (55%) ಹೋಗುತ್ತೆ. 8 ನಿಮಿಷಕ್ಕಿಂತ ಉದ್ದದ ವಿಡಿಯೋಗಳಲ್ಲಿ ಮಧ್ಯದಲ್ಲೂ ads (mid-roll) ಹಾಕಬಹುದು.

Shorts revenue

Shorts ಮಧ್ಯೆ ಬರೋ ads ಇಂದ ಬಂದ ಹಣ ಒಂದು pool ಆಗಿ ಸೇರುತ್ತೆ, ಅದರಿಂದ ಪ್ರತಿ ಚಾನೆಲ್‌ಗೆ ಅವರ Shorts views ಪ್ರಕಾರ ಭಾಗ ಸಿಗುತ್ತೆ (creator ಗೆ 45%). ಸಾಮಾನ್ಯವಾಗಿ ಒಂದು Shorts view ಗೆ ಬರೋ ಹಣ ಉದ್ದದ ವಿಡಿಯೋದ view ಗಿಂತ ತುಂಬಾ ಕಡಿಮೆ.

Fan funding: memberships, Super Thanks, Super Chat

  • Channel memberships: ನಿಮ್ಮ fans ತಿಂಗಳಿಗೆ ಸ್ವಲ್ಪ ಹಣ ಕೊಟ್ಟು ವಿಶೇಷ badge, ವಿಡಿಯೋ, posts ಪಡೆಯೋದು.
  • Super Thanks: ಒಂದು ವಿಡಿಯೋ ಇಷ್ಟ ಆದ್ರೆ ನೋಡೋರು "thanks" ಆಗಿ ಹಣ ಕೊಡೋದು.
  • Super Chat ಮತ್ತು Super Stickers: live ವಿಡಿಯೋ ಸಮಯದಲ್ಲಿ ನೋಡೋರು ಕೊಡೋದು.

YouTube Premium

Premium ಇರೋರು ನಿಮ್ಮ ವಿಡಿಯೋ ನೋಡಿದ್ರೆ, ಅವರ subscription ಹಣದಲ್ಲಿ ಒಂದು ಭಾಗ ನಿಮಗೆ ಬರುತ್ತೆ.

ಬ್ರ್ಯಾಂಡ್ deals

ಒಂದು ಬ್ರ್ಯಾಂಡ್ ತಮ್ಮ ಪ್ರಾಡಕ್ಟ್ ಬಗ್ಗೆ ನಿಮ್ಮ ವಿಡಿಯೋದಲ್ಲಿ ಹೇಳೋಕೆ ನೇರವಾಗಿ ನಿಮಗೆ ಹಣ ಕೊಡೋದು. ಇದು YouTube ಮೂಲಕ ಅಲ್ಲ, ನಿಮ್ಮ ಮತ್ತು ಬ್ರ್ಯಾಂಡ್ ನಡುವೆ. ಕನ್ನಡದಂತ regional ಚಾನೆಲ್‌ಗಳಿಗೆ ಇದು ತುಂಬಾ ಮುಖ್ಯ ದಾರಿ, ಯಾಕಂದ್ರೆ ಕರ್ನಾಟಕದ ಜನರನ್ನ ತಲುಪೋಕೆ ಬ್ರ್ಯಾಂಡ್‌ಗಳಿಗೆ ಕನ್ನಡ creators ಬೇಕು. Paid promotion ಮಾಡಿದಾಗ YouTube Studio ಅಲ್ಲಿ "paid promotion" ಅಂತ tick ಮಾಡೋದು ಮರೀಬೇಡಿ.

Affiliate ಮತ್ತು YouTube Shopping

ನೀವು ಬಳಸೋ ಪ್ರಾಡಕ್ಟ್‌ನ affiliate link description ಅಲ್ಲಿ ಹಾಕಿ, ಯಾರಾದ್ರೂ ಅದರಿಂದ ತಗೊಂಡ್ರೆ commission. ಕೆಲವು ದೇಶಗಳಲ್ಲಿ YouTube Shopping ಇಂದ ವಿಡಿಯೋದಲ್ಲೇ ಪ್ರಾಡಕ್ಟ್ tag ಮಾಡಬಹುದು; ಭಾರತದಲ್ಲಿ ಇರೋ ಆಯ್ಕೆಗಳನ್ನ YouTube Studio ಅಲ್ಲಿ ನೋಡಿ.

2. RPM ಅಂದ್ರೆ ಏನು?

YouTube Studio ನ Analytics ಅಲ್ಲಿ "Revenue" tab ಅಲ್ಲಿ ಎರಡು ಪದ ಕಾಣುತ್ತೆ:

  • CPM: ads ಹಾಕೋ ಬ್ರ್ಯಾಂಡ್‌ಗಳು 1,000 ad views ಗೆ ಕೊಡೋ ಹಣ. ಇದು YouTube ನ ಭಾಗ ತೆಗೆಯೋ ಮುಂಚಿನ ಲೆಕ್ಕ.
  • RPM: ನಿಮ್ಮ ಚಾನೆಲ್‌ಗೆ 1,000 views ಗೆ ನಿಜವಾಗಿ ಬರೋ ಹಣ, ಎಲ್ಲಾ ದಾರಿಗಳೂ ಸೇರಿ, YouTube ನ ಭಾಗ ತೆಗೆದ ಮೇಲೆ. ನಿಮಗೆ ಮುಖ್ಯ ಆಗೋದು RPM.

ಅಂದ್ರೆ ಸರಳವಾಗಿ: ನಿಮ್ಮ ads income ≈ views ÷ 1,000 × RPM. RPM ಪ್ರತಿ ಚಾನೆಲ್‌ಗೆ, ಪ್ರತಿ ತಿಂಗಳಿಗೆ ಬದಲಾಗುತ್ತೆ. ಬೇರೆಯವರ RPM ನಿಮ್ಮ ಚಾನೆಲ್‌ಗೆ ಅನ್ವಯ ಆಗಲ್ಲ.

3. ಕನ್ನಡ ಚಾನೆಲ್‌ಗಳ RPM ಯಾಕೆ ಬದಲಾಗುತ್ತೆ?

  • Audience ಯಾವ ದೇಶದಲ್ಲಿದೆ: Advertisers ಒಂದು view ಗೆ ಕೊಡೋ ಹಣ ದೇಶದಿಂದ ದೇಶಕ್ಕೆ ಬೇರೆ. ಕನ್ನಡ ಚಾನೆಲ್‌ಗಳ ಹೆಚ್ಚಿನ views ಭಾರತದಿಂದ ಬರುತ್ತೆ, ಅಲ್ಲಿ ad ದರ ಕೆಲವು ದೇಶಗಳಿಗಿಂತ ಕಡಿಮೆ. Gulf, US, UK ಅಲ್ಲಿರೋ ಕನ್ನಡಿಗರು ಜಾಸ್ತಿ ನೋಡಿದ್ರೆ RPM ಸ್ವಲ್ಪ ಬದಲಾಗಬಹುದು.
  • Niche (ವಿಷಯ): ಹಣಕಾಸು, tech, education ತರಹದ topics ಗೆ advertisers ಜಾಸ್ತಿ ಕೊಡ್ತಾರೆ; ಮನರಂಜನೆ, comedy ಗೆ ಸಾಮಾನ್ಯವಾಗಿ ಕಡಿಮೆ.
  • ವರ್ಷದ ಯಾವ ಸಮಯ: ವರ್ಷದ ಕೊನೆಯ ತಿಂಗಳುಗಳಲ್ಲಿ ads ಜಾಸ್ತಿ, ವರ್ಷದ ಶುರುವಿನಲ್ಲಿ ಕಡಿಮೆ ಆಗೋದು ಸಾಮಾನ್ಯ.
  • Shorts vs ಉದ್ದದ ವಿಡಿಯೋ: Shorts ಜಾಸ್ತಿ ಇರೋ ಚಾನೆಲ್‌ಗಳ ಒಟ್ಟು RPM ಸಾಮಾನ್ಯವಾಗಿ ಕಡಿಮೆ.
  • ನೋಡೋರ ವಯಸ್ಸು ಮತ್ತು device: ಮಕ್ಕಳಿಗಾಗಿ ಮಾಡಿದ (made for kids) ವಿಡಿಯೋಗಳಿಗೆ personalised ads ಇರಲ್ಲ, ಅದಕ್ಕೆ RPM ಕಡಿಮೆ ಆಗಬಹುದು.

4. ನಿಮ್ಮ income ಮೇಲೆ ಏನು ಪರಿಣಾಮ ಬೀರುತ್ತೆ

  • Watch time: ಜನ ನಿಮ್ಮ ವಿಡಿಯೋ ಎಷ್ಟು ಹೊತ್ತು ನೋಡ್ತಾರೆ ಅನ್ನೋದು. ಜಾಸ್ತಿ ನೋಡಿದ್ರೆ ಜಾಸ್ತಿ ads, ಮತ್ತು YouTube ನಿಮ್ಮ ವಿಡಿಯೋನ ಜಾಸ್ತಿ ಜನರಿಗೆ ತೋರಿಸುತ್ತೆ.
  • Ad-friendly content: ಜಗಳ, ಕೆಟ್ಟ ಪದಗಳು, ವಿವಾದದ ವಿಷಯ ಇದ್ರೆ ವಿಡಿಯೋಗೆ ಹಳದಿ ($) icon ಬಂದು ads ಕಡಿಮೆ ಆಗುತ್ತೆ.
  • Copyright: ಬೇರೆಯವರ ಹಾಡು, clips ಬಳಸಿದ್ರೆ ಆ ವಿಡಿಯೋದ ಹಣ ಅವರಿಗೆ ಹೋಗಬಹುದು. YouTube Audio Library ಬಳಸಿ.
  • Consistency: ನಿಯಮಿತವಾಗಿ upload ಮಾಡೋ ಚಾನೆಲ್‌ಗಳಿಗೆ ಹಳೆ ವಿಡಿಯೋಗಳ views ಕೂಡ ಸೇರ್ತಾ ಹೋಗುತ್ತೆ.
  • ಒಂದೇ ದಾರಿ ನಂಬಬೇಡಿ: ads, ಬ್ರ್ಯಾಂಡ್ deals, affiliate ಎಲ್ಲಾ ಸೇರಿದ್ರೆ income ಸ್ಥಿರವಾಗಿರುತ್ತೆ.

5. YPP ಸೇರೋಕೆ ಏನು ಬೇಕು

ಯಾವ ಹಂತಏನು ಬೇಕು
ಪೂರ್ತಿ YPP
(ads ಇಂದ ಹಣ ಸೇರಿ)
1,000 subscribers, ಜೊತೆಗೆ ಕಳೆದ 12 ತಿಂಗಳಲ್ಲಿ 4,000 public watch hours
ಅಥವಾ
1,000 subscribers, ಜೊತೆಗೆ ಕಳೆದ 90 ದಿನದಲ್ಲಿ 1 ಕೋಟಿ (10M) valid public Shorts views
ಕೆಳಗಿನ ಹಂತ
(fan funding: memberships, Super Thanks ತರಹ)
ಸುಮಾರು 500 subscribers, ಜೊತೆಗೆ ಇತ್ತೀಚೆಗೆ ಕೆಲವು uploads ಮತ್ತು ಸ್ವಲ್ಪ watch hours ಅಥವಾ Shorts views. ಎಲ್ಲಾ ದೇಶಗಳಲ್ಲೂ ಒಂದೇ ತರ ಇಲ್ಲ.

ಜೊತೆಗೆ AdSense account, 2-step verification, ಮತ್ತು YouTube ನ monetization policies ಪಾಲನೆ ಬೇಕು. ಈ ನಿಯಮಗಳು ಬದಲಾಗ್ತಾ ಇರುತ್ತೆ, apply ಮಾಡೋ ಮುಂಚೆ YouTube ನ official YPP page check ಮಾಡಿ. ಚಾನೆಲ್ ಶುರು ಮಾಡೋದರ ಬಗ್ಗೆ: ಕನ್ನಡದಲ್ಲಿ ಯೂಟ್ಯೂಬ್ ಚಾನೆಲ್ ಶುರು ಮಾಡೋದು ಹೇಗೆ?

6. "ಕನ್ನಡ YouTubers ಎಷ್ಟು ಗಳಿಸ್ತಾರೆ?"

ನೇರ ಉತ್ತರ: ಒಂದು ಸಂಖ್ಯೆ ಇಲ್ಲ. ಒಂದೇ subscribers ಇರೋ ಎರಡು ಚಾನೆಲ್‌ಗಳ income ತುಂಬಾ ಬೇರೆ ಇರಬಹುದು, ಯಾಕಂದ್ರೆ views, watch time, niche, audience, ಬ್ರ್ಯಾಂಡ್ deals ಎಲ್ಲಾ ಬೇರೆ. Social media ಅಲ್ಲಿ ಓಡಾಡೋ "ಇವರು ತಿಂಗಳಿಗೆ ಇಷ್ಟು ಗಳಿಸ್ತಾರೆ" ಅನ್ನೋ ಲೆಕ್ಕಗಳು ಹೆಚ್ಚಾಗಿ ಊಹೆ ಅಷ್ಟೇ, ಆ ಚಾನೆಲ್‌ನ ನಿಜವಾದ Studio data ಯಾರಿಗೂ ಕಾಣಲ್ಲ.

ನಿಮ್ಮ ಚಾನೆಲ್‌ಗೆ ಎಷ್ಟು ಬರಬಹುದು ಅಂತ ತಿಳ್ಕೊಳ್ಳೋಕೆ ಒಂದೇ ದಾರಿ: YPP ಸೇರಿ, ಕೆಲವು ತಿಂಗಳ ನಿಮ್ಮದೇ RPM ನೋಡಿ.

ಸಾಮಾನ್ಯ ಪ್ರಶ್ನೆಗಳು

YouTube views ಗೆ ಹಣ ಕೊಡುತ್ತಾ?

ನೇರವಾಗಿ views ಗೆ ಅಲ್ಲ. YPP ಸೇರಿದ ಮೇಲೆ ವಿಡಿಯೋದಲ್ಲಿ ಬರೋ ads ಮತ್ತು ಬೇರೆ features ಇಂದ ಬರೋ ಹಣದಲ್ಲಿ ಭಾಗ ಕೊಡುತ್ತೆ. YPP ಮುಂಚೆ views ಗೆ ಹಣ ಬರಲ್ಲ.

Shorts ಇಂದ ಹಣ ಬರುತ್ತಾ?

ಹೌದು, YPP ಸೇರಿದ ಮೇಲೆ Shorts revenue ಸಿಗುತ್ತೆ. ಆದ್ರೆ ಒಂದು Shorts view ಗೆ ಬರೋ ಹಣ ಸಾಮಾನ್ಯವಾಗಿ ಉದ್ದದ ವಿಡಿಯೋಗಿಂತ ತುಂಬಾ ಕಡಿಮೆ.

ಕನ್ನಡ ಚಾನೆಲ್ ಅಂದ್ರೆ ಕಡಿಮೆ ಹಣನಾ?

ಭಾಷೆ ಒಂದೇ ಕಾರಣ ಅಲ್ಲ. Audience ಯಾವ ದೇಶದಲ್ಲಿದೆ, ಯಾವ ವಿಷಯ, ಎಷ್ಟು watch time ಅನ್ನೋದು ಜಾಸ್ತಿ ಮುಖ್ಯ. ಮತ್ತು ಕರ್ನಾಟಕದ ಜನರನ್ನ ತಲುಪೋಕೆ ಬ್ರ್ಯಾಂಡ್‌ಗಳಿಗೆ ಕನ್ನಡ creators ಬೇಕೇ ಬೇಕು.

ಹಣ ಹೇಗೆ, ಯಾವಾಗ ಬರುತ್ತೆ?

AdSense account ಮೂಲಕ, ನಿಮ್ಮ balance AdSense ನ payment threshold ಮುಟ್ಟಿದ ಮೇಲೆ ತಿಂಗಳಿಗೊಮ್ಮೆ bank ಗೆ ಬರುತ್ತೆ. AdSense ಅಲ್ಲಿ tax ಮಾಹಿತಿ ಕೊಡೋದು ಮರೀಬೇಡಿ, ಇಲ್ಲದಿದ್ರೆ ಜಾಸ್ತಿ tax ಕಡಿತ ಆಗಬಹುದು.

1,000 subscribers ಆದ ತಕ್ಷಣ ಹಣ ಬರುತ್ತಾ?

ಇಲ್ಲ. Subscribers ಜೊತೆ watch hours ಅಥವಾ Shorts views ಕೂಡ ಬೇಕು, ಆಮೇಲೆ apply ಮಾಡಿ YouTube review ಮಾಡಿ approve ಮಾಡ್ಬೇಕು.

Maya Loka course

YouTube ಚಾನೆಲ್ ಕಟ್ಟೋದನ್ನ ಕನ್ನಡದಲ್ಲಿ, ಹಂತ ಹಂತವಾಗಿ ಕಲೀಬೇಕಾ?

Practical YouTube Success Course ಅಲ್ಲಿ Shubha K ತಮ್ಮ 12+ ವರ್ಷದ YouTube ಅನುಭವದಿಂದ ಕಲಿಸ್ತಾರೆ: ಐಡಿಯಾ test ಮಾಡೋದು, title ಮತ್ತು thumbnail ಸುಧಾರಿಸೋದು, ಚಾನೆಲ್ ಕಟ್ಟೋದು, ಬದಲಾಗ್ತಾನೇ ಇರೋ YouTube ಅನ್ನ ನಿಭಾಯಿಸೋದು. ಕನ್ನಡದಲ್ಲಿ, English, ಹಿಂದಿ, ತೆಲುಗು ಜೊತೆ. Income guarantee ಇಲ್ಲ; ಕಲಿಸೋದು ಕೆಲಸ ಹೇಗೆ ಮಾಡೋದು ಅಂತ.

Shubha K
Shubha K, Maya Loka, Mysuru

ಕನ್ನಡ YouTuber. Maya Loka ಚಾನೆಲ್‌ಗೆ 2.95M subscribers; ಏಳು ಚಾನೆಲ್‌ಗಳ network ಸೇರಿ 5.2M subscribers. 100+ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡಿದ್ದಾರೆ. Shubha ಬಗ್ಗೆ ಇನ್ನಷ್ಟು

In English: YouTube earning in Kannada

YouTube pays creators through the YouTube Partner Programme: a share of ad revenue on long videos, a share of the Shorts ad pool, fan funding (channel memberships, Super Thanks, Super Chat and Super Stickers) and YouTube Premium revenue. Creators also earn directly from brand deals and affiliate links, which matter a lot for regional channels. RPM, shown in YouTube Studio, is what your channel actually earns per 1,000 views after YouTube's share. Kannada channels' RPMs vary with audience country, niche, season, the mix of Shorts and long videos, and made-for-kids settings; income depends on watch time, advertiser-friendly content, copyright and consistency. Full YPP has needed 1,000 subscribers plus 4,000 public watch hours in 12 months, or 10 million valid Shorts views in 90 days, with a lower fan-funding tier from about 500 subscribers. Rules change, so check YouTube's official page. There is no fixed amount per view and no guaranteed income.