ಕನ್ನಡ guide · Online courses

ನಂಬಬಹುದಾದ online course ಆರಿಸೋದು ಹೇಗೆ? 10 checks

"Best YouTube course in Kannada" ಅಂತ ಹುಡುಕಿದ್ರೆ ತುಂಬಾ ads ಬರುತ್ತೆ, ಎಲ್ಲರೂ ತಮ್ಮದೇ best ಅಂತಾರೆ. ಯಾರ ಮಾತನ್ನೂ ಹಾಗೇ ನಂಬೋ ಬದಲು, ಹಣ ಕಟ್ಟೋ ಮುಂಚೆ ನೀವೇ ಈ 10 checks ಮಾಡಿ. ನಮ್ಮ course ಗೂ ಇದೇ checks ಅನ್ವಯ ಆಗುತ್ತೆ.

ಹಣ ಗಳಿಸೋದು ಕಲಿಸ್ತೀವಿ ಅನ್ನೋ courses ಈಗ ಎಲ್ಲಾ ಕಡೆ ಇವೆ: YouTube, Instagram, UGC, trading, freelancing. ಕೆಲವು ನಿಜವಾಗಿ ಉಪಯೋಗ ಆಗುತ್ತೆ, ಕೆಲವು ಬರೀ ದೊಡ್ಡ ಮಾತು. ವ್ಯತ್ಯಾಸ ಗೊತ್ತಾಗೋಕೆ ಯಾವ ವಿಶೇಷ ಜ್ಞಾನನೂ ಬೇಡ, ಸ್ವಲ್ಪ ಸಮಯ ಕೊಟ್ಟು ಈ ಪ್ರಶ್ನೆಗಳನ್ನ ಕೇಳಿದ್ರೆ ಸಾಕು.

ತಗೊಳ್ಳೋ ಮುಂಚೆ ಮಾಡಬೇಕಾದ 10 checks

  1. Teacher ಗೆ ನಿಜವಾದ results ಇದೆಯಾ, ನೀವೇ check ಮಾಡಬಹುದಾ?

    "ನಾನು ಲಕ್ಷ ಗಳಿಸ್ತೀನಿ" ಅನ್ನೋ screenshot ಸಾಕಾಗಲ್ಲ, screenshot ಸುಲಭವಾಗಿ ಮಾಡಬಹುದು. YouTube course ಆದ್ರೆ teacher ನ ಚಾನೆಲ್ ನೀವೇ ತೆರೆದು ನೋಡಿ: subscribers, ಎಷ್ಟು ವರ್ಷದಿಂದ ವಿಡಿಯೋ ಹಾಕ್ತಿದಾರೆ, ಇತ್ತೀಚಿನ ವಿಡಿಯೋಗಳಿಗೆ views ಬರ್ತಿದೆಯಾ.

  2. ಅವರು ಇವತ್ತೂ ಅದೇ ಕೆಲಸ ಮಾಡ್ತಿದಾರಾ?

    YouTube ಮತ್ತು Instagram ನಿಯಮಗಳು ಬೇಗ ಬದಲಾಗುತ್ತೆ. ಐದು ವರ್ಷದ ಹಿಂದೆ ಚಾನೆಲ್ ಬಿಟ್ಟವರು ಕಲಿಸೋದು ಹಳೆಯದಾಗಿರಬಹುದು. ಅವರ ಇತ್ತೀಚಿನ ವಿಡಿಯೋ ಯಾವಾಗ ಬಂತು ಅಂತ ನೋಡಿ.

  3. ನಿಮ್ಮ ಭಾಷೆಯಲ್ಲಿ ಇದೆಯಾ?

    ಅರ್ಥ ಆಗದ ಭಾಷೆಯಲ್ಲಿ ಕಲಿತ್ರೆ ಅರ್ಧ ವಿಷಯ ತಪ್ಪಿ ಹೋಗುತ್ತೆ. ಕನ್ನಡದಲ್ಲಿ ಇದೆಯಾ, subtitles ಇದೆಯಾ, ಎಲ್ಲಾ lessons ಗೂ ಇದೆಯಾ ಅಥವಾ ಕೆಲವಕ್ಕೆ ಮಾತ್ರನಾ ಅಂತ ಕೇಳಿ.

  4. "Guaranteed income" promise ಇದೆಯಾ?

    ಇದ್ರೆ ಅದೇ ದೊಡ್ಡ red flag. ಯಾವ course ಕೂಡ ನಿಮ್ಮ income guarantee ಕೊಡೋಕೆ ಆಗಲ್ಲ, ಯಾಕಂದ್ರೆ ಅದು ನಿಮ್ಮ ಕೆಲಸ, ನಿಮ್ಮ topic, market ಮೇಲೆ ನಿಂತಿರುತ್ತೆ. "30 ದಿನದಲ್ಲಿ ಇಷ್ಟು ಗ್ಯಾರಂಟಿ" ಅಂದ್ರೆ ಅಲ್ಲಿಂದ ದೂರ ಇರಿ.

  5. ತಗೊಳ್ಳೋ ಮುಂಚೆ sample ನೋಡಬಹುದಾ?

    Intro ಅಥವಾ ಒಂದು ಪೂರ್ತಿ lesson free ಆಗಿ ನೋಡೋಕೆ ಸಿಕ್ಕಿದ್ರೆ, teacher ಹೇಗೆ ಕಲಿಸ್ತಾರೆ, ನಿಮಗೆ ಅರ್ಥ ಆಗುತ್ತಾ ಅಂತ ಮೊದಲೇ ಗೊತ್ತಾಗುತ್ತೆ.

  6. Refund policy ಏನು? ಓದಿದೀರಾ?

    ಕೆಲವು courses refund ಕೊಡ್ತಾರೆ, ಕೆಲವು ಕೊಡಲ್ಲ. ಎರಡೂ ಸರಿ, ಆದ್ರೆ ಅದು ಸ್ಪಷ್ಟವಾಗಿ, ಹಣ ಕಟ್ಟೋ ಮುಂಚೆ ಬರೆದಿರಬೇಕು. Refund policy page ಹುಡುಕಿದ್ರೂ ಸಿಗ್ಲಿಲ್ಲ ಅಂದ್ರೆ ಅದು ಒಳ್ಳೆ ಲಕ್ಷಣ ಅಲ್ಲ.

  7. Access ಎಷ್ಟು ದಿನ? Subscription ಆ?

    Lifetime ಆ, ಕೆಲವು ತಿಂಗಳು ಮಾತ್ರನಾ? ತಾನಾಗೇ ಪ್ರತಿ ತಿಂಗಳು renew ಆಗಿ ಹಣ ಕಟ್ ಆಗುತ್ತಾ? ಇದು checkout ಮುಂಚೆನೇ ಗೊತ್ತಿರಬೇಕು.

  8. ಪ್ರಶ್ನೆ ಇದ್ರೆ ಯಾರು ಉತ್ತರ ಕೊಡ್ತಾರೆ?

    Recorded course ಆದ್ರೂ doubt ಕೇಳೋಕೆ ಒಂದು ದಾರಿ ಇರಬೇಕು: comments, WhatsApp, email, community group. ಹಣ ಕಟ್ಟೋ ಮುಂಚೆ ಒಂದು ಪ್ರಶ್ನೆ ಕಳಿಸಿ ನೋಡಿ, ಉತ್ತರ ಬರುತ್ತಾ ಅಂತ.

  9. Reviews ನೀವೇ check ಮಾಡಬಹುದಾ?

    Website ನಲ್ಲಿ ಹಾಕಿರೋ ಹೆಸರು ಇಲ್ಲದ reviews ಗಿಂತ, ಬೇರೆ ಕಡೆ ಸಿಗೋ ನಿಜವಾದ ಜನರ ಮಾತು ಮುಖ್ಯ: Google, YouTube comments, ನಿಮಗೆ ಗೊತ್ತಿರೋ ಯಾರಾದ್ರೂ ಆ course ಮಾಡಿದ್ರೆ ಅವರು.

  10. ಯಾರು, ಎಲ್ಲಿಂದ ನಡೆಸ್ತಿದಾರೆ?

    Business ನ ಹೆಸರು, ಊರು, email, GST invoice ಕೊಡ್ತಾರಾ ಅಂತ ನೋಡಿ. "ಈಗಲೇ ತಗೊಳ್ಳಿ, ಇನ್ನು 10 ನಿಮಿಷ ಮಾತ್ರ" ಅಂತ ಒತ್ತಡ ಹಾಕಿ, ಪ್ರಶ್ನೆ ಕೇಳೋಕೆ ಸಮಯ ಕೊಡದವರ ಬಗ್ಗೆ ಎಚ್ಚರ.

Maya Loka Courses ಈ checks ಗೆ ಹೇಗೆ ಹೊಂದುತ್ತೆ

ನಾವೇ ಈ checklist ಬರೆದು ನಮ್ಮನ್ನ ಬಿಟ್ಟುಬಿಡೋದು ಸರಿ ಅಲ್ಲ. ಇಲ್ಲಿ ನೀವು ನೀವೇ check ಮಾಡಬಹುದಾದ ವಿಷಯಗಳು ಮಾತ್ರ ಇವೆ. "ನಾವು best" ಅಂತ ಹೇಳಲ್ಲ; ತೀರ್ಮಾನ ನಿಮ್ಮದು.

  • Teacher ಮತ್ತು ಚಾನೆಲ್: Shubha K ನಡೆಸೋ Maya Loka YouTube ಚಾನೆಲ್‌ಗೆ 2.95M subscribers; ಏಳು ಚಾನೆಲ್‌ಗಳ network ಸೇರಿ 5.2M. YouTube ಅಲ್ಲಿ "Maya Loka" ಹುಡುಕಿ ನೀವೇ ನೋಡಿ. 12+ ವರ್ಷದಿಂದ YouTube ಮಾಡ್ತಿದಾರೆ, ಇವತ್ತೂ ವಿಡಿಯೋ ಹಾಕ್ತಿದಾರೆ, ಮತ್ತು 100+ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡಿದ್ದಾರೆ.
  • ಭಾಷೆ: YouTube course ಕನ್ನಡ ಮತ್ತು English ಅಲ್ಲಿ, ಹೆಚ್ಚಿನ chapters ಹಿಂದಿ, ತೆಲುಗು ಅಲ್ಲೂ ಇದೆ. UGC course ಕನ್ನಡದಲ್ಲಿ, ಹೆಚ್ಚಿನ lessons ಗೆ English, ಹಿಂದಿ, ತೆಲುಗು subtitles.
  • Income promise: ನಾವು income guarantee ಕೊಡಲ್ಲ. Course ಕಲಿಸೋದು ಕೆಲಸ ಹೇಗೆ ಮಾಡೋದು ಅಂತ; ಫಲಿತಾಂಶ ನಿಮ್ಮ ಕೆಲಸದ ಮೇಲೆ.
  • Sample: YouTube course ನ intro ಮತ್ತು ಒಂದು ಪೂರ್ತಿ class, UGC course ನ intro, course page ಅಲ್ಲೇ free ಆಗಿ ನೋಡಬಹುದು.
  • Refund policy: ನೇರವಾಗಿ ಹೇಳ್ತೀವಿ: pay ಮಾಡಿದ ತಕ್ಷಣ access ಶುರು ಆಗೋದ್ರಿಂದ, course ತಗೊಂಡ ಮೇಲೆ refund ಇಲ್ಲ. ದುಡ್ಡು ಹೋಗಿ access ಸಿಗಲಿಲ್ಲ ಅಥವಾ ಎರಡು ಸಲ ದುಡ್ಡು ಹೋಯ್ತು ಅಂದ್ರೆ, 7 ದಿನದ ಒಳಗೆ ತಿಳಿಸಿದ್ರೆ ವಾಪಸ್ ಕೊಡ್ತೀವಿ. ಪೂರ್ತಿ ವಿವರ Refund Policy ಅಲ್ಲಿದೆ. ಅದಕ್ಕೇ free sample ನೋಡಿ, ಪ್ರಶ್ನೆ ಕೇಳಿ, ಆಮೇಲೆ ತೀರ್ಮಾನ ಮಾಡಿ.
  • Access: ಒಂದೇ ಸಲ payment, subscription ಇಲ್ಲ, ತಾನಾಗೇ renew ಆಗಲ್ಲ. YouTube course ಗೆ pay ಮಾಡಿದ ದಿನದಿಂದ 7 ತಿಂಗಳು, UGC course ಗೆ 3 ತಿಂಗಳು access. ಇದು ಪ್ರತಿ course ನ ಪ್ರಶ್ನೆ-ಉತ್ತರ ಪುಟ ಅಲ್ಲಿ ಬರೆದಿದೆ.
  • Support: ಪ್ರತಿ ವಿಡಿಯೋ ಕೆಳಗೆ doubt ಕೇಳಬಹುದು; app ನ Help, WhatsApp, ಮತ್ತು [email protected] ಅಲ್ಲೂ ಉತ್ತರ ಸಿಗುತ್ತೆ.
  • Reviews: ಈ ಪುಟದಲ್ಲಿ ನಾವು reviews ಹಾಕಿಲ್ಲ. ನಮ್ಮ ಬಗ್ಗೆ ಜನ ಏನು ಹೇಳ್ತಾರೆ ಅಂತ YouTube comments ಅಲ್ಲಿ ಮತ್ತು ಬೇರೆ ಕಡೆ ನೀವೇ ನೋಡಿ.
  • ಯಾರು, ಎಲ್ಲಿಂದ: Maya Loka Media, Mysuru, Karnataka. Razorpay checkout, ಪ್ರತಿ purchase ಗೂ GST invoice.

ಸಾಮಾನ್ಯ ಪ್ರಶ್ನೆಗಳು

Free YouTube ವಿಡಿಯೋ ನೋಡಿ ಕಲಿಯೋಕೆ ಆಗಲ್ವಾ?

ಆಗುತ್ತೆ, ತುಂಬಾ ಜನ ಹಾಗೇ ಕಲಿತಿದಾರೆ. Course ಇಂದ ಸಿಗೋದು ಒಂದು ಕ್ರಮ: ಯಾವುದು ಮೊದಲು, ಯಾವುದು ಆಮೇಲೆ, ಒಂದೇ ಕಡೆ. ನಿಮಗೆ ಸಮಯ ಮತ್ತು ತಾಳ್ಮೆ ಇದ್ರೆ free ದಾರಿನೂ ಸರಿ.

ದುಬಾರಿ course ಅಂದ್ರೆ ಒಳ್ಳೆ course ಆ?

ಇಲ್ಲ. ಬೆಲೆ quality ಯ ಲೆಕ್ಕ ಅಲ್ಲ. ಮೇಲಿನ 10 checks ಬೆಲೆಗಿಂತ ಮುಖ್ಯ.

Refund ಇಲ್ಲದ course ತಗೊಳ್ಳಬಹುದಾ?

Policy ಮೊದಲೇ ಸ್ಪಷ್ಟವಾಗಿ ಬರೆದಿದ್ರೆ, ಮತ್ತು ನೀವು sample ನೋಡಿ, ಪ್ರಶ್ನೆ ಕೇಳಿ ತೀರ್ಮಾನ ಮಾಡಿದ್ರೆ, ತಗೊಳ್ಳಬಹುದು. Policy ಅಸ್ಪಷ್ಟ ಆಗಿದ್ರೆ ಬೇಡ.

Certificate ಇದ್ರೆ ಕೆಲಸ ಸಿಗುತ್ತಾ?

YouTube, UGC ತರಹದ ಕೆಲಸದಲ್ಲಿ ಬ್ರ್ಯಾಂಡ್‌ಗಳು ಮತ್ತು audience ನೋಡೋದು ನಿಮ್ಮ ವಿಡಿಯೋಗಳನ್ನ, certificate ಅಲ್ಲ. Certificate ಇರೋದು ಒಳ್ಳೇದು, ಆದ್ರೆ ಕೆಲಸ ತರೋದು ನಿಮ್ಮ portfolio.

Course ತಗೊಂಡ ತಕ್ಷಣ ಹಣ ಬರುತ್ತಾ?

ಇಲ್ಲ. Course ದಾರಿ ತೋರಿಸುತ್ತೆ; ನಡೆಯೋದು ನೀವು. ಹಣ ಬರೋದು ನೀವು ಎಷ್ಟು ನಿಯಮಿತವಾಗಿ ಕೆಲಸ ಮಾಡ್ತೀರ ಅನ್ನೋದರ ಮೇಲೆ.

Maya Loka course

ಈ checks ಮಾಡಿ, ಆಮೇಲೆ ನಮ್ಮ YouTube course ನೋಡಿ

Practical YouTube Success Course ಅಲ್ಲಿ Shubha K ತಮ್ಮ 12+ ವರ್ಷದ YouTube ಅನುಭವದಿಂದ ಕಲಿಸ್ತಾರೆ: ಐಡಿಯಾ test ಮಾಡೋದು, title ಮತ್ತು thumbnail ಸುಧಾರಿಸೋದು, ಚಾನೆಲ್ ಕಟ್ಟೋದು. Course page ಅಲ್ಲಿ intro ಮತ್ತು ಒಂದು ಪೂರ್ತಿ class free ಆಗಿ ನೋಡಿ, ಆಮೇಲೆ ತೀರ್ಮಾನ ಮಾಡಿ.

Shubha K
Shubha K, Maya Loka, Mysuru

ಕನ್ನಡ YouTuber. Maya Loka ಚಾನೆಲ್‌ಗೆ 2.95M subscribers; ಏಳು ಚಾನೆಲ್‌ಗಳ network ಸೇರಿ 5.2M subscribers. 100+ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡಿದ್ದಾರೆ. Shubha ಬಗ್ಗೆ ಇನ್ನಷ್ಟು

In English: how to pick a trustworthy online course

Before paying for any course that promises to teach you to earn money, check that the teacher has real results you can verify yourself (a public channel, not screenshots) and still does the work today; that it is taught in a language you understand, with subtitles if needed; that it makes no guaranteed-income promise; that you can watch a free sample lesson; that the refund policy and the access period are written clearly before checkout, with no surprise subscription; that there is a way to ask questions; that reviews exist somewhere you can check independently; and that the business, location and invoices are clear, without pressure tactics. Maya Loka Courses is run by Shubha K (Maya Loka channel 2.95M subscribers, 5.2M across seven channels) from Mysuru, Karnataka. Courses are in Kannada with subtitles, one-time payment with no auto-renewal (7 months access for YouTube, 3 months for UGC), a free intro and sample class on the course page, and no refunds after purchase except failed or duplicate payments reported within 7 days. We do not promise income.