ಕನ್ನಡ guide · YouTube

ಕನ್ನಡದಲ್ಲಿ ಯೂಟ್ಯೂಬ್ ಚಾನೆಲ್ ಶುರು ಮಾಡೋದು ಹೇಗೆ? 2026 guide

ಕನ್ನಡದಲ್ಲಿ YouTube ಚಾನೆಲ್ ಶುರು ಮಾಡ್ಬೇಕು ಅಂತ ತುಂಬಾ ದಿನದಿಂದ ಅಂದ್ಕೊಳ್ತಾ ಇದೀರಾ? ಯಾವ topic, ಚಾನೆಲ್ ಹೇಗೆ ಮಾಡೋದು, ಮೊದಲ ವಿಡಿಯೋಗಳು, title, thumbnail, Shorts, monetization: ಎಲ್ಲಾ ಸರಳವಾಗಿ, ಒಂದೇ ಪುಟದಲ್ಲಿ.

ನಾವು 2014 ರಲ್ಲಿ ಒಂದು ಅಡುಗೆ ಚಾನೆಲ್ ಇಂದ ಶುರು ಮಾಡಿದ್ವಿ. ಆಗ ಯಾರೂ step by step ಹೇಳಿಕೊಟ್ಟಿರಲಿಲ್ಲ; ತಪ್ಪು ಮಾಡ್ತಾ, test ಮಾಡ್ತಾ ಕಲಿತ್ವಿ. ಆ ಅನುಭವದಿಂದ, ಹೊಸಬರಿಗೆ ಮೊದಲು ಬೇಕಾಗೋ ವಿಷಯಗಳನ್ನ ಇಲ್ಲಿ ಹೇಳ್ತಿದೀವಿ.

1. ಮೊದಲು topic ಆರಿಸಿ

ಚಾನೆಲ್‌ನ ಹೆಸರು, logo ಗಿಂತ ಮುಂಚೆ ಈ ಪ್ರಶ್ನೆಗೆ ಉತ್ತರ ಬೇಕು: "ನಾನು ಯಾವ ವಿಷಯದ ಬಗ್ಗೆ 100 ವಿಡಿಯೋ ಮಾಡಬಲ್ಲೆ?"

  • ನಿಮಗೆ ಇಷ್ಟ ಇರಲಿ: ವರ್ಷಗಟ್ಟಲೆ ಮಾಡ್ಬೇಕು, ಬೇಜಾರ್ ಆಗೋ ವಿಷಯ ಬೇಡ.
  • ನಿಮಗೆ ಗೊತ್ತಿರಲಿ: ಅಡುಗೆ, ಕೃಷಿ, ಹಳ್ಳಿ ಜೀವನ, tech, study tips, ಕರ್ನಾಟಕ travel, ಮನೆ ಮತ್ತು ಕುಟುಂಬ, fitness, ಕೈ ಕೆಲಸ. ನಿಮ್ಮ ದಿನನಿತ್ಯದ ಜೀವನದಲ್ಲೇ topic ಸಿಗುತ್ತೆ.
  • ಜನ ಹುಡುಕ್ತಿರ್ಬೇಕು: YouTube search bar ಅಲ್ಲಿ ನಿಮ್ಮ topic type ಮಾಡಿ, ಕೆಳಗೆ ಬರೋ suggestions ನೋಡಿ. ಅದೇ ಜನ ನಿಜವಾಗಿ ಹುಡುಕೋ ಪದಗಳು.

ಶುರುವಿನಲ್ಲಿ ಒಂದೇ topic ಇಟ್ಕೊಳ್ಳಿ. ಇವತ್ತು ಅಡುಗೆ, ನಾಳೆ ಮೊಬೈಲ್ review, ನಾಡಿದ್ದು vlog ಮಾಡಿದ್ರೆ YouTube ಗೂ ನೋಡೋರಿಗೂ ನಿಮ್ಮ ಚಾನೆಲ್ ಯಾರಿಗೆ ಅಂತ ಅರ್ಥ ಆಗಲ್ಲ.

2. ಚಾನೆಲ್ ಮಾಡೋದು ಹೇಗೆ

  1. ಒಂದು Google account ಬೇಕು. ಚಾನೆಲ್‌ಗಾಗಿ ಬೇರೆ account ಮಾಡ್ಕೊಂಡ್ರೆ ಒಳ್ಳೇದು.
  2. YouTube app ಓಪನ್ ಮಾಡಿ, ನಿಮ್ಮ profile photo ಮೇಲೆ tap ಮಾಡಿ, "Create a channel" ಮೇಲೆ tap ಮಾಡಿ.
  3. ಹೆಸರು ಮತ್ತು handle: ಸುಲಭವಾಗಿ ನೆನಪಿರೋ, spelling ಕಷ್ಟ ಇಲ್ಲದ ಹೆಸರು. ಮುಂದೆ topic ಸ್ವಲ್ಪ ಬದಲಾದ್ರೂ ಸರಿಹೋಗೋ ಹಾಗಿರಲಿ.
  4. Profile photo ಮತ್ತು banner: ನಿಮ್ಮ ಮುಖ ಅಥವಾ ಸರಳ logo. Banner ಅಲ್ಲಿ ಚಾನೆಲ್ ಏನು ಅಂತ ಒಂದು ಸಾಲು.
  5. Description: ಚಾನೆಲ್ ಯಾರಿಗೆ, ಏನು ಸಿಗುತ್ತೆ ಅಂತ ಕನ್ನಡದಲ್ಲಿ ಬರೀರಿ, ಜನ ಹುಡುಕೋ English ಪದಗಳೂ ಇರಲಿ. Contact email ಹಾಕಿ, ಬ್ರ್ಯಾಂಡ್‌ಗಳು ಮುಂದೆ ಅಲ್ಲೇ ಹುಡುಕ್ತಾರೆ.
  6. Phone verify ಮಾಡಿ: custom thumbnail ಹಾಕೋಕೆ ಮತ್ತು ಉದ್ದದ ವಿಡಿಯೋ upload ಮಾಡೋಕೆ ಇದು ಬೇಕು. YouTube Studio ಅಲ್ಲಿ settings ನೋಡಿ.

3. ಮೊದಲ 10 ವಿಡಿಯೋ

ಮೊದಲ ವಿಡಿಯೋ perfect ಆಗಿರಲ್ಲ, ಆಗೋದೂ ಬೇಡ. ಮೊದಲ 10 ವಿಡಿಯೋ ನಿಮ್ಮ practice. ಇಲ್ಲಿ ಮುಖ್ಯ ಆಗೋದು ಶುರು ಮಾಡೋದು ಮತ್ತು ಪ್ರತಿ ವಿಡಿಯೋದಿಂದ ಸ್ವಲ್ಪ ಕಲಿಯೋದು.

  • ಮೊದಲೇ 10 ideas ಬರೆದಿಟ್ಕೊಳ್ಳಿ. ಉದಾಹರಣೆಗೆ ಅಡುಗೆ ಚಾನೆಲ್ ಆದ್ರೆ: 10 ನಿಮಿಷದ ಬೆಳಿಗ್ಗೆ ತಿಂಡಿ, ಮಕ್ಕಳ tiffin, ಹಬ್ಬದ ಸಿಹಿ, ಕಡಿಮೆ ಎಣ್ಣೆ snacks, ಮಳೆಗಾಲದ ಸಾರು. ಜನ ಹುಡುಕೋ ವಿಷಯಗಳು.
  • ಒಂದೇ format: ಪ್ರತಿ ವಿಡಿಯೋ ಒಂದೇ ತರ ಶುರು ಆಗಲಿ, ನೋಡೋರಿಗೆ ನಿಮ್ಮ ಶೈಲಿ ಪರಿಚಯ ಆಗುತ್ತೆ.
  • ಮೊದಲ 30 ಸೆಕೆಂಡ್: ವಿಡಿಯೋದಲ್ಲಿ ಏನು ಸಿಗುತ್ತೆ ಅಂತ ತಕ್ಷಣ ಹೇಳಿ. ಉದ್ದದ intro ಬೇಡ.
  • ಬೆಳಕು ಮತ್ತು ಧ್ವನಿ: ಫೋನ್ ಸಾಕು. ಕಿಟಕಿ ಬೆಳಕು ಮತ್ತು ಸ್ಪಷ್ಟ ಧ್ವನಿ, ದುಬಾರಿ camera ಗಿಂತ ಮುಖ್ಯ.
  • ಕಲಿಯಿರಿ: 10 ವಿಡಿಯೋ ಆದ ಮೇಲೆ YouTube Studio ಅಲ್ಲಿ ನೋಡಿ: ಯಾವ ವಿಡಿಯೋ ಜಾಸ್ತಿ click ಆಯ್ತು, ಯಾವದನ್ನ ಜನ ಜಾಸ್ತಿ ಹೊತ್ತು ನೋಡಿದ್ರು. ಮುಂದಿನ ವಿಡಿಯೋಗಳು ಅದರ ತರ ಮಾಡಿ.

4. Title ಮತ್ತು thumbnail

ಜನ ನಿಮ್ಮ ವಿಡಿಯೋ ನೋಡ್ಬೇಕಾ ಬೇಡ್ವಾ ಅಂತ ತೀರ್ಮಾನ ಮಾಡೋದು title ಮತ್ತು thumbnail ನೋಡಿ, ಒಂದೆರಡು ಸೆಕೆಂಡ್‌ನಲ್ಲಿ.

Title

  • ನೋಡೋರಿಗೆ ಏನು ಸಿಗುತ್ತೆ ಅಂತ ನೇರವಾಗಿ ಹೇಳಿ.
  • ಕನ್ನಡ ಮತ್ತು ಜನ ಹುಡುಕೋ English ಪದ ಎರಡೂ ಇರಲಿ. ಉದಾಹರಣೆ: "ರಾಗಿ ಮುದ್ದೆ ಸುಲಭವಾಗಿ ಮಾಡೋದು ಹೇಗೆ | Ragi Mudde Recipe in Kannada".
  • ಮುಖ್ಯ ಪದಗಳು title ನ ಶುರುವಿನಲ್ಲೇ ಇರಲಿ; ಫೋನ್‌ನಲ್ಲಿ ಉದ್ದದ title ಕೊನೆ ಕಾಣಿಸಲ್ಲ.

Thumbnail

  • ಒಂದು ಮುಖ್ಯ ವಿಷಯ: ನಿಮ್ಮ ಮುಖ, ಅಥವಾ ಆ ತಿಂಡಿ, ಅಥವಾ ಆ ವಸ್ತು.
  • 3 ರಿಂದ 4 ದೊಡ್ಡ ಪದಗಳು ಮಾತ್ರ, ಚಿಕ್ಕ ಫೋನ್ screen ಅಲ್ಲೂ ಓದೋ ಹಾಗೆ.
  • ಗಾಢ ಬಣ್ಣ ಮತ್ತು contrast. Canva ತರಹದ app ಅಲ್ಲಿ ಸುಲಭವಾಗಿ ಮಾಡಬಹುದು.
  • Thumbnail ಅಲ್ಲಿ ತೋರಿಸಿದ್ದು ವಿಡಿಯೋದಲ್ಲಿ ಇರಲೇಬೇಕು. ಮೋಸದ thumbnail ಇಂದ ಒಂದು click ಸಿಗಬಹುದು, ಆದ್ರೆ ನಂಬಿಕೆ ಹೋಗುತ್ತೆ.

5. Shorts ಆ, ಉದ್ದದ ವಿಡಿಯೋನಾ?

ಎರಡಕ್ಕೂ ಬೇರೆ ಬೇರೆ ಕೆಲಸ ಇದೆ.

  • Shorts vertical ಆಗಿ, ಚಿಕ್ಕದಾಗಿರುತ್ತೆ. ಹೊಸ ಜನರಿಗೆ ಬೇಗ ತಲುಪುತ್ತೆ, ಮಾಡೋದೂ ಬೇಗ. ಆದ್ರೆ Shorts ನೋಡೋರು ಹೆಚ್ಚಾಗಿ scroll ಮಾಡ್ತಾ ಮುಂದೆ ಹೋಗ್ತಾರೆ.
  • ಉದ್ದದ ವಿಡಿಯೋ (ಸಾಮಾನ್ಯವಾಗಿ 8 ರಿಂದ 20 ನಿಮಿಷ) ನಿಮ್ಮ ಮೇಲೆ ನಂಬಿಕೆ ಕಟ್ಟುತ್ತೆ, watch hours ಕೊಡುತ್ತೆ, ಮತ್ತು ನಿಮ್ಮನ್ನ ಮತ್ತೆ ಮತ್ತೆ ನೋಡೋ audience ಕಟ್ಟುತ್ತೆ.

ಒಳ್ಳೆ ದಾರಿ ಅಂದ್ರೆ ಎರಡನ್ನೂ ಮಾಡೋದು: ಉದ್ದದ ವಿಡಿಯೋ ನಿಮ್ಮ ಮುಖ್ಯ ಕೆಲಸ, ಅದರಿಂದಲೇ ಒಂದೆರಡು ಚಿಕ್ಕ ಭಾಗ ತೆಗೆದು Shorts ಮಾಡಿ, ಅದರಿಂದ ಜನರನ್ನ ಉದ್ದದ ವಿಡಿಯೋಗೆ ಕರೆತನ್ನಿ. ನೆನಪಿರಲಿ: Shorts views 4,000 watch hours ಲೆಕ್ಕಕ್ಕೆ ಸೇರಲ್ಲ.

6. YouTube Partner Programme (YPP): basics

YPP ಸೇರಿದ ಮೇಲೆ ನಿಮ್ಮ ವಿಡಿಯೋಗಳ ads ಇಂದ ಮತ್ತು ಬೇರೆ features ಇಂದ ಹಣ ಬರೋಕೆ ಶುರು ಆಗುತ್ತೆ. ನಾವು ಕೊನೆಯ ಸಲ ನೋಡಿದಾಗ ಇದ್ದ ನಿಯಮಗಳು ಇವು:

ಯಾವ ಹಂತಏನು ಬೇಕು
ಪೂರ್ತಿ YPP
(ads ಇಂದ ಹಣ ಸೇರಿ)
1,000 subscribers, ಜೊತೆಗೆ ಕಳೆದ 12 ತಿಂಗಳಲ್ಲಿ 4,000 public watch hours
ಅಥವಾ
1,000 subscribers, ಜೊತೆಗೆ ಕಳೆದ 90 ದಿನದಲ್ಲಿ 1 ಕೋಟಿ (10M) valid public Shorts views
ಕೆಳಗಿನ ಹಂತ
(fan funding: memberships, Super Thanks ತರಹ)
ಸುಮಾರು 500 subscribers, ಜೊತೆಗೆ ಇತ್ತೀಚೆಗೆ ಕೆಲವು uploads ಮತ್ತು ಸ್ವಲ್ಪ watch hours ಅಥವಾ Shorts views. ಈ ಹಂತ ಎಲ್ಲಾ ದೇಶಗಳಲ್ಲೂ ಒಂದೇ ತರ ಇಲ್ಲ, YouTube ನ page check ಮಾಡಿ, ನಿಯಮ ಬದಲಾಗ್ತಾ ಇರುತ್ತೆ.

ಇದರ ಜೊತೆಗೆ YouTube ನ community guidelines ಮತ್ತು monetization policies ಪಾಲಿಸ್ಬೇಕು, ಒಂದು AdSense account ಬೇಕು, ಮತ್ತು ನಿಮ್ಮ account ಗೆ 2-step verification on ಆಗಿರಬೇಕು. ಬೇರೆಯವರ ವಿಡಿಯೋ, ಬೇರೆಯವರ music ಬಳಸಿದ ಚಾನೆಲ್‌ಗಳಿಗೆ approval ಸಿಗೋದು ಕಷ್ಟ. Music ಬೇಕು ಅಂದ್ರೆ YouTube Studio ನ Audio Library ಬಳಸಿ.

ಗಮನಿಸಿ: ಈ ಸಂಖ್ಯೆಗಳನ್ನ YouTube ಆಗಾಗ ಬದಲಾಯಿಸುತ್ತೆ. Apply ಮಾಡೋ ಮುಂಚೆ YouTube ನ official YPP page ನೋಡಿ. ಅಲ್ಲಿ ಇರೋದೇ ಸರಿ.

7. Consistency: ಎಲ್ಲಕ್ಕಿಂತ ಮುಖ್ಯ

ಒಳ್ಳೆ ಚಾನೆಲ್‌ಗಳು ಒಂದು ವಿಡಿಯೋ viral ಆಗಿ ಬೆಳೆಯೋದು ಕಡಿಮೆ. ಹೆಚ್ಚಿನವು ತಿಂಗಳುಗಟ್ಟಲೆ, ವರ್ಷಗಟ್ಟಲೆ ನಿಯಮಿತವಾಗಿ upload ಮಾಡಿ ಬೆಳೆದಿರೋದು.

  • ನಿಮಗೆ ಆಗೋ schedule ಆರಿಸಿ: ವಾರಕ್ಕೆ ಒಂದು ಉದ್ದದ ವಿಡಿಯೋ ಮತ್ತು ಎರಡು ಮೂರು Shorts ಆದ್ರೂ ಸಾಕು. ಮುಖ್ಯ ಅಂದ್ರೆ ನಿಲ್ಲಿಸದೇ ಇರೋದು.
  • Batch ಮಾಡಿ: ಒಂದೇ ದಿನ 2 ರಿಂದ 3 ವಿಡಿಯೋ shoot ಮಾಡಿಟ್ಕೊಳ್ಳಿ, ಬೇರೆ ದಿನ edit ಮಾಡಿ.
  • Comments ಗೆ ಉತ್ತರ ಕೊಡಿ: ಮೊದಲ ನೂರು ಜನರೇ ನಿಮ್ಮ ಚಾನೆಲ್‌ನ ಅಡಿಪಾಯ.
  • ತಿಂಗಳಿಗೊಮ್ಮೆ ನೋಡಿ: Analytics ಪ್ರತಿ ಗಂಟೆ ನೋಡಿದ್ರೆ ಬೇಜಾರ್ ಆಗುತ್ತೆ. ತಿಂಗಳಿಗೊಮ್ಮೆ ನೋಡಿ, ಏನು ಬದಲಾಯಿಸ್ಬೇಕು ಅಂತ ತೀರ್ಮಾನ ಮಾಡಿ.
  • Subscribers ಕೊಂಡ್ಕೊಳ್ಬೇಡಿ: ಅದು ನಿಮ್ಮ ಚಾನೆಲ್‌ಗೆ ಹಾನಿ ಮಾಡುತ್ತೆ, ಮತ್ತು YouTube ನಿಯಮಕ್ಕೂ ವಿರುದ್ಧ.

ಸಾಮಾನ್ಯ ಪ್ರಶ್ನೆಗಳು

ಕನ್ನಡ ಚಾನೆಲ್‌ಗೆ audience ಇದೆಯಾ?

ಹೌದು. ಕನ್ನಡದಲ್ಲಿ ನೋಡೋ ಜನ ತುಂಬಾ ಇದಾರೆ, ಕರ್ನಾಟಕದಲ್ಲೂ ಹೊರಗೂ. ನಮ್ಮ Maya Loka ಚಾನೆಲ್‌ಗೆ ಇವತ್ತು 2.95M subscribers ಇದಾರೆ, ಎಲ್ಲಾ ಕನ್ನಡದಲ್ಲೇ.

ಫೋನ್‌ನಲ್ಲೇ ಚಾನೆಲ್ ನಡೆಸಬಹುದಾ?

ಹೌದು. Shoot, edit, upload ಎಲ್ಲಾ ಫೋನ್‌ನಲ್ಲೇ ಮಾಡಬಹುದು. ಬೆಳಕು ಮತ್ತು ಧ್ವನಿ ಸರಿಯಾಗಿದ್ರೆ ಸಾಕು.

ಮುಖ ತೋರಿಸ್ಲೇಬೇಕಾ?

ಇಲ್ಲ. ಅಡುಗೆ, ಕೈ ಕೆಲಸ, tech, ಕೃಷಿ ತರಹದ topics ಅಲ್ಲಿ ಕೈಗಳು ಮತ್ತು ಧ್ವನಿ ಮಾತ್ರ ಇರೋ ಚಾನೆಲ್‌ಗಳೂ ಚೆನ್ನಾಗಿ ನಡೀತವೆ. ಆದ್ರೆ ಮುಖ ತೋರಿಸಿದ್ರೆ ಜನ ಬೇಗ ಪರಿಚಯ ಮಾಡ್ಕೊಳ್ತಾರೆ.

ಎಷ್ಟು ದಿನದಲ್ಲಿ monetize ಆಗುತ್ತೆ?

ಇದಕ್ಕೆ fixed ಉತ್ತರ ಇಲ್ಲ, guarantee ಕೂಡ ಇಲ್ಲ. ನಿಮ್ಮ topic, ವಿಡಿಯೋ quality ಮತ್ತು ನೀವು ಎಷ್ಟು ನಿಯಮಿತವಾಗಿ upload ಮಾಡ್ತೀರ ಅನ್ನೋದರ ಮೇಲೆ ನಿಂತಿರುತ್ತೆ.

YouTube ಜೊತೆ ಬ್ರ್ಯಾಂಡ್ ಕೆಲಸನೂ ಮಾಡಬಹುದಾ?

ಹೌದು. ತುಂಬಾ creators ads ಹಣದ ಜೊತೆ ಬ್ರ್ಯಾಂಡ್‌ಗಳಿಗೆ UGC ವಿಡಿಯೋ ಕೂಡ ಮಾಡ್ತಾರೆ. UGC ಅಂದ್ರೆ ಏನು? ಪುಟ ನೋಡಿ.

Maya Loka course

YouTube ಅನ್ನ ಹಂತ ಹಂತವಾಗಿ, ಕನ್ನಡದಲ್ಲಿ ಕಲೀಬೇಕಾ?

Practical YouTube Success Course ಅಲ್ಲಿ Shubha K ತಮ್ಮ 12+ ವರ್ಷದ YouTube ಅನುಭವದಿಂದ ಕಲಿಸ್ತಾರೆ: ಐಡಿಯಾ test ಮಾಡೋದು, title ಮತ್ತು thumbnail ಸುಧಾರಿಸೋದು, ಚಾನೆಲ್ ಕಟ್ಟೋದು, ಬದಲಾಗ್ತಾನೇ ಇರೋ YouTube ಅನ್ನ ನಿಭಾಯಿಸೋದು. ಕನ್ನಡದಲ್ಲಿ, English, ಹಿಂದಿ, ತೆಲುಗು subtitles ಜೊತೆ.

Shubha K
Shubha K, Maya Loka, Mysuru

ಕನ್ನಡ YouTuber. Maya Loka ಚಾನೆಲ್‌ಗೆ 2.95M subscribers; ಏಳು ಚಾನೆಲ್‌ಗಳ network ಸೇರಿ 5.2M subscribers. 100+ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡಿದ್ದಾರೆ. Shubha ಬಗ್ಗೆ ಇನ್ನಷ್ಟು

In English: how to start a YouTube channel in Kannada

Pick one topic you could make 100 videos about, create the channel from the YouTube app (name, handle, photo, banner, a Kannada description with the English words people search, and phone verification), then plan and publish your first 10 videos as practice. Write titles that say what the viewer gets, mixing Kannada with searched English terms, and design simple, honest thumbnails. Use Shorts for reach and long videos for trust and watch hours. The YouTube Partner Programme has needed 1,000 subscribers plus 4,000 public watch hours in 12 months, or 10 million Shorts views in 90 days; a lower fan-funding tier starts around 500 subscribers. These rules change, so check YouTube's official page before applying. Above all, upload on a schedule you can keep. There is no guaranteed timeline or income.